ಆದಿಮುಕ್ತನ, ಅನಾದಿಮುಕ್ತನ, ನಾದ, ಬಿಂದು, ಕಳಾತೀತನ,
ಭೇದಿಸಬಾರದಭೇದ್ಯನ, ಅಪ್ರಮಾಣನ, ವೇದಶಾಸ್ತ್ರ
ಆಗಮ ಪುರಾಣಾದಿಗಳರಸಿ ಕಾಣದನಾದಿ ಪುರುಷನ,
ಸ್ವಯಂಪ್ರಕಾಶ ಸ್ವತಃ ಸಿದ್ಧನನೆಂತು ಅರಿವರಯ್ಯ
ಸ್ವಾನುಭಾವಸಿದ್ಧರಲ್ಲದವರು?
ಹಲವನೋದಿ ಹೇಳಿ ಕೇಳಿ ಹಲಬರೆಲ್ಲ ಹೊಲಬುಗೆಟ್ಟರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ,
ಪ್ರಸಾದವಿಲ್ಲದವರೆಲ್ಲರು ಭ್ರಾಂತರಾದರು.
Art
Manuscript
Music
Courtesy:
Transliteration
Ādimuktana, anādimuktana, nāda, bindu, kaḷātītana,
bhēdisabāradabhēdyana, apramāṇana, vēdaśāstra
āgama purāṇādigaḷarasi kāṇadanādi puruṣana,
svayamprakāśa svataḥ sid'dhananentu arivarayya
svānubhāvasid'dharalladavaru?
Halavanōdi hēḷi kēḷi halabarella holabugeṭṭaru.
Nijaguru svatantrasid'dhaliṅgēśvarana,
prasādavilladavarellaru bhrāntarādaru.