Index   ವಚನ - 193    Search  
 
ಹಣೆಗಣ್ಣು ಕೊರಳಕಪ್ಪು ಫಣಿಕುಂಡಲ ದಶಭುಜ ಉಡುಪತಿಯ ಜಡೆಯ ನಡುವಿಹ ಗಂಗೆಯ ಉಡಿಯ ಪುಲಿಚರ್ಮವ ತೊಡಿಗೆಯ ಕರೋಟಿಮಾಲೆಯ ಹಿಡಿದ ಕಂಕಾಳದಂಡವ,ನಿವನಡಗಿಸಿ ಮೃಡ ಶರಣನಾಮವಿಡಿದು ಚರಿಸಿದನೆಂಬ ದೃಢಭಕ್ತಿಯಿಲ್ಲದವರಿಗೆ ಶಿವನೊಲಿಯೆಂದರೆಂತೊಲಿವ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.