ಕಾದಬಲ್ಲೆವೆಂಬವರೆಲ್ಲ ಕಲಿವೀರಭಟರಹರೆ?.
ಇರಿಯದ ವೀರತ್ವ ಮೆರೆಯಬಲ್ಲುದೆ ಹೇಳ?
ನಿಜವನರಿಯದೆ ಬರಿಮಾತನಾಡುವರೆಲ್ಲ ಜ್ಞಾನಿಗಳಹರೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿದು,
ಮಾಯೆಯ ಗೆಲಬಲ್ಲಾತನೆ ಕಲಿವೀರನು.
Art
Manuscript
Music
Courtesy:
Transliteration
Kādaballevembavarella kalivīrabhaṭarahare?.
Iriyada vīratva mereyaballude hēḷa?
Nijavanariyade barimātanāḍuvarella jñānigaḷahare?
Nijaguru svatantrasid'dhaliṅgēśvarananaridu,
māyeya gelaballātane kalivīranu.