Index   ವಚನ - 197    Search  
 
ಸುವಿಚಾರದರಿವು ಕಣ್ದೆರೆದು, ನಿರ್ಮಲತ್ವ ನಿರಹಂಕಾರ, ಅನಪೇಕ್ಷೆ ಅಕಾಮ ಮತಿಯಾಗಿ, ನಿರ್ಮಲಾಚಾರದಿಂದ ಶಿವನ ಭಜಿಸಿ, ಪರಮಾನಂದರೂಪನಾಗಿ ಶಿವಪದವ ನೆಮ್ಮಿ, ಇತರವನರಿಯದ ಶಿವನಿಷ್ಠನ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.