Index   ವಚನ - 199    Search  
 
ಪರಿಶುದ್ಧ ಮನದಿಂದ ಲಿಂಗವ ಧರಿಸಿ, ನಿಯಮ ವ್ರತ ಶೀಲ ಧರ್ಮದಲ್ಲಿ ನಿರತನಾದ ಭಕ್ತನ, ಅಂಗವೆಂಬ ಅರಮನೆಯಲ್ಲಿಹ ಲಿಂಗಕ್ಕೆ ಮನವೆ ಮಂಚ, ನೆನಹೆ ಹಾಸುಗೆ, ಅನುಭಾವವೆ ಒರಗು, ಶಾಂತಿಯೆ ಆಲವಟ್ಟವು, ಸಮತೆಯೆ ಸಂತೋಷವಾಗಿ, ಸದ್ಭಕ್ತನ ಹೃದಯ ಸಿಂಹಾಸನದಲ್ಲಿ ಮೂರ್ತಿಗೊಂಡಿಪ್ಪನಯ್ಯಾ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.