Index   ವಚನ - 201    Search  
 
ಲಿಂಗನಿಷ್ಠಾಭರಿತನಾದ ಕಾರಣ ಅಂಗಗುಣವಳಿದು ಕಂಗಳು ಲಿಂಗದಲ್ಲಿ ಲೀಯವಾದವಾಗಿ ಅಂಗಜನ ಭಯವಿಲ್ಲ. ಲಿಂಗವೆಂಬಂತೆ ಇಹನಾಗಿ, ಕಾಲನ ಭಯವಿಲ್ಲ. ಇಹಪರವೆಂಬೆರಡರ ದೆಸೆಯ ಹೊದ್ದನಾಗಿ ಮಾಯಾಭಯವಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣನ ಚಾರಿತ್ರ ಆವ ಲೋಕದೊಳಗೂ ಇಲ್ಲ.