Index   ವಚನ - 202    Search  
 
ಸ್ವರ್ಗ ಮರ್ತ್ಯ ಪಾತಾಳವೆಂಬ ಮೂರುಲೋಕದ ಒಳಗೂ ಹೊರಗೂ ಶಿವನು ಭರಿತನಾಗಿರ್ದನೆಂದಡೆ, ಆ ಮೂರುಲೋಕದ ಪ್ರಾಣಿಗಳೆಲ್ಲಾ ಶಿವಪದವನೆಯ್ದೆ ಬಲ್ಲರೇ? ಎಯ್ದಲರಿಯರಾಗಿ. ಅದೇನು ಕಾರಣವೆಂದಡೆ, ಶ್ರೀಗುರುದರ್ಶನದಿಂದಲ್ಲದೆ ಎಯ್ದಬಾರದಾಗಿ. ಅದು ಕಾರಣ ಗುರುಕೃಪಾ ನಿರೀಕ್ಷಣೆಯಿಂದವೆ ಪರಮಮುಕ್ತಿಯಪ್ಪುದು ತಪ್ಪದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.