Index   ವಚನ - 213    Search  
 
ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ, ನಿನ್ನ ನೆನವುತ್ತಿಪ್ಪೆ ನಾನು, ನನ್ನ ನೆನೆವುತ್ತಿಪ್ಪೆ ನೀನು. ನನಗೂ ನಿನಗೂ ಏನೂ ಹೊರೆಯಿಲ್ಲ. ಇದ ನೀ ಬಲ್ಲೆ, ನಾ ಬಲ್ಲೆ, ನಿನ್ನನಗಲದಿಪ್ಪೆ ನಾನು, ನನ್ನನಗಲದಿಪ್ಪೆ ನೀನು, ಚಿನ್ನ ಬಣ್ಣದಂತೆ ಇಪ್ಪೆವಾಗಿ ಇನ್ನು ಭಿನ್ನವುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.