ನಡೆವ ಗತಿಗಳಲ್ಲಿ ನಿಮ್ಮ ಕೂಡಿ ನಡೆವೆನಯ್ಯ.
ಹಿಡಿವಲ್ಲಿ ಬಿಡುವಲ್ಲಿ ನಿಮ್ಮ ಕೂಡಿ ಹಿಡಿವೆನು ಬಿಡುವೆನಯ್ಯ.
ನುಡಿವಲ್ಲಿ ನಿಮ್ಮ ಕೂಡಿ ನುಡಿವೆನು.
ಒಡಲಿಂದ್ರಿಯಂಗಳೆಲ್ಲ ನಿಮ್ಮವಾಗಿ ಎನಗೊಂದೊಡೆತನವಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ
ನಾನು ನಿಮ್ಮೊಳಗಾಗಿ.
Art
Manuscript
Music
Courtesy:
Transliteration
Naḍeva gatigaḷalli nim'ma kūḍi naḍevenayya.
Hiḍivalli biḍuvalli nim'ma kūḍi hiḍivenu biḍuvenayya.
Nuḍivalli nim'ma kūḍi nuḍivenu.
Oḍalindriyaṅgaḷella nim'mavāgi enagondoḍetanavilla,
nijaguru svatantrasid'dhaliṅgēśvara
nānu nim'moḷagāgi.