Index   ವಚನ - 216    Search  
 
ಊರ್ಧ್ವಮುಖಮೂಲ ಅಧೋಶಾಖೆಯಾದ ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದಾನೆ. ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ. ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು ನಾನು ಬೆರಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.