Index   ವಚನ - 215    Search  
 
ನಡೆವ ಗತಿಗಳಲ್ಲಿ ನಿಮ್ಮ ಕೂಡಿ ನಡೆವೆನಯ್ಯ. ಹಿಡಿವಲ್ಲಿ ಬಿಡುವಲ್ಲಿ ನಿಮ್ಮ ಕೂಡಿ ಹಿಡಿವೆನು ಬಿಡುವೆನಯ್ಯ. ನುಡಿವಲ್ಲಿ ನಿಮ್ಮ ಕೂಡಿ ನುಡಿವೆನು. ಒಡಲಿಂದ್ರಿಯಂಗಳೆಲ್ಲ ನಿಮ್ಮವಾಗಿ ಎನಗೊಂದೊಡೆತನವಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಾನು ನಿಮ್ಮೊಳಗಾಗಿ.