Index   ವಚನ - 221    Search  
 
ಶ್ರೋತ್ರೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ಆಕಾಶವನು, ತ್ವಗಿಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ವಾಯುವನು, ನೇತ್ರೇಂದ್ರಿಯವನು ಈ ಇಂದ್ರಿಯದೊಡನೆ ಕೂಡಿದ ಅಗ್ನಿಯನು, ಜಿಹ್ವೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಅಪ್ಪುವನು, ನಾಸಿಕೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಪೃಥ್ವಿಯನು, ಈ ಭೂತಂಗಳು ಕೂಡಿ, ಸಕಲೇಂದ್ರಿಯ ಶಬ್ದಾದಿ ವಿಷಯಾರ್ಪಣವ ಮಾಡಿ, ಪ್ರಸಾದವ ಪಡೆದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿಗಳು.