Index   ವಚನ - 222    Search  
 
ಶುದ್ಧಾನ್ನಪಾನಾದಿಗಳನು ಮಂತ್ರಭಸ್ಮದಿಂದ ಪವಿತ್ರವ ಮಾಡಿ, ಪತಿಭಕ್ತಿಯಿಂದ ಲಿಂಗಮುಖಕ್ಕೆ ಸಮರ್ಪಿಸಿ, ತಾ ಸ್ವಾದಿಸುವದು. ತನ್ನ ರಸನೆಯ ಲಿಂಗದ ರಸನೆಯೆಂದು ಸವಿದು, ಪ್ರಸಾದತೃಪ್ತಿಯ ಪಡೆದಾತನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿತ್ಯಸುಖಿಯಾದಾತನು.