Index   ವಚನ - 247    Search  
 
ನಾಲ್ಕು ಬಾಗಿಲು ಕೂಡಿದ ಠಾವಿನಲ್ಲಿ ತ್ರಿಮಂಡಲದ ಮಧ್ಯದ ಚತುರ್ದಳದ ನಡುವಣ ಚತುರ್ಪೀಠಸಿಂಹಾಸನದ ಮೇಲೆ ಮೂರ್ತಿಗೊಂಡು ನೋಡುವ ಬೆಡಗಿನ ಪುರುಷನ ತುಡುಕಿ ಹಿಡಿದು ನೆರೆಯಬಲ್ಲರೆ, ಆತ ಸರ್ವನಿರ್ವಾಣಿ, ಸಕಲ ನಿಃಕಲಾತ್ಮಕನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ.