Index   ವಚನ - 248    Search  
 
ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗವನರಿಯದೆ ಬಹಿರಂಗದಲ್ಲಿ ಬಳಲುತ್ತಿದ್ದರಲ್ಲ! ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾರ ಪರಬ್ರಹ್ಮ ಪ್ರಾಣಲಿಂಗವನವರೆತ್ತ ಬಲ್ಲರು? ಮಹಾನುಭಾವದಿಂದ ತಿಳಿದು ನೋಡಲು ತನ್ನಲ್ಲಿಯೇ ತೋರುತ್ತಿದೆ. ಹೇಳಿಹೆ ಕೇಳಿಹೆನೆಂದಡೆ ನುಡಿಗೊಳಗಾಗದು. ತಿಳಿದುನೋಡಲು ತಾನಲ್ಲದೆ ಮತ್ತೇನೂ ಇಲ್ಲ. ಅದೇ ಆದಿಪ್ರಾಣಮಯಲಿಂಗ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.