Index   ವಚನ - 251    Search  
 
ತಿರುಳು ಕರಗಿದ ಬೀಜ ಮರಳಿ ಹುಟ್ಟಬಲ್ಲುದೆ ಅಯ್ಯ? ತೊಟ್ಟ ಬಿಟ್ಟ ಹಣ್ಣ ಮರಳಿ ತೊಟ್ಟ ಹತ್ತುವುದೆ ಅಯ್ಯ? ನೆಟ್ಟನೆ ಪ್ರಾಣಲಿಂಗದ ನಿಜವನರಿದವ ಮರಳಿ ಹುಟ್ಟಬಲ್ಲನೆ ಹೇಳಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?