Index   ವಚನ - 250    Search  
 
ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ, ಪ್ರಾಣ ಲಿಂಗವಾಯಿತ್ತು. ಆ ಲಿಂಗ ಸರ್ವಕರಣಂಗಳ ವೇಧಿಸಿ, ಕರಣಂಗಳು ಲಿಂಗ ಕಿರಣಂಗಳಾದ ಕಾರಣ ಒಳಗೆ ಕರತಳಾಮಳಕದಂತೆ ಲಿಂಗ ನೆಲೆಗೊಂಡಿತ್ತಾಗಿ ಹೊರಗೇನೆಂದೂ ಅರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನೀವು ಪ್ರಾಣಲಿಂಗವಾಗಿ.