Index   ವಚನ - 253    Search  
 
ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯ. ಮಂಡಲತ್ರಯದ ಮಧ್ಯದಲ್ಲಿ ನಿಂದು ಖಂಡಿತನೆಂಬ ಹಾಂಗೆ ತೋರುತ್ತಿದ್ದೆಯಯ್ಯ. ನಿನ್ನ ಬೆಡಗ ನಾ ಬಲ್ಲೆ. ಖಂಡಪತ್ರದಲ್ಲಿ ತೋರುವ ಚಂಡಕಿರಣದಂತೆ ತೋರಿದೆಯಾಗಿ, ಎನ್ನ ಕಂಗಳ ಕೊನೆಯಲ್ಲಿ ನಿಂದು ನೋಡುವಾತ ನೀನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.