ಕಾಯದ ಸ್ಥಿತಿಗತಿಯನರಿದು, ಕಾಯವ ಶೋಧಿಸಿ
ಮುಂದೆ ಸಾಧಿಸಿಕೊಳ್ಳಿರಣ್ಣ.
ದೇಹಮಧ್ಯದಾಧಾರಪರ ಪ್ರಕೃತಿಯಲ್ಲಿ
ಪ್ರಾಣವಾಯು ಹುಟ್ಟಿ, ಅಲ್ಲಿಂದ
ಲಂಬಿಕಾಸ್ಥಾನವ ತಾಗಿ, ಸಕಾರಾಂತವಾಗಿ
ನಿವೃತ್ತಿ ಪ್ರವೃತ್ತಿಯಾಗಿ ಚರಿಸುವುದು.
ಅಲ್ಲಿ ಇಪ್ಪತ್ತೊಂದುಸಾವಿರದ ಆರುನೂರು ಜೀವಜಪವ
ಜಪಿಸುವುದು, ಗುರೂಪದೇಶದಿಂದರಿದಡೆ
ಅಂತ್ಯವಾದಿಯಾಗಿ ಆದಿಯಂತ್ಯವಾಗಿ
ಆ ಜಪವು ದಹರಾಕಾಶದ ನಾದಾತ್ಮ ಲಿಂಗದಲ್ಲಿ ಕೂಡುವುದೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಮಂತ್ರಯೋಗವು.
Art
Manuscript
Music
Courtesy:
Transliteration
Kāyada sthitigatiyanaridu, kāyava śōdhisi
munde sādhisikoḷḷiraṇṇa.
Dēhamadhyadādhārapara prakr̥tiyalli
prāṇavāyu huṭṭi, allinda
lambikāsthānava tāgi, sakārāntavāgi
nivr̥tti pravr̥ttiyāgi carisuvudu.
Alli ippattondusāvirada ārunūru jīvajapava
japisuvudu, gurūpadēśadindaridaḍe
antyavādiyāgi ādiyantyavāgi
ā japavu daharākāśada nādātma liṅgadalli kūḍuvudē
nijaguru svatantrasid'dhaliṅgēśvaranalli mantrayōgavu.