Index   ವಚನ - 257    Search  
 
ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು ಊರ್ಧ್ವದ್ವಾರವ ತೆಗೆದು ಎವೆ ಹಳಚದೆ ಒಳಗೆ ನಿಮ್ಮ ನೋಡುತ್ತಿದ್ದೆನಯ್ಯ. ಬಂದುದ ಹೋದುದನರಿಯದೆ ನಿಮ್ಮ ನೋಡುತ್ತಿದ್ದೆನಯ್ಯ. ಮನ ನಿಂದುದು ನಿಮ್ಮಲ್ಲಿ. ಹೆರೆಹಿಂಗದ ಪರಮ ಸುಖ ದೊರೆಕೊಂಡಿತ್ತು. ಇನ್ನಂಜೆನಂಜೆ ಜನನ ಮರಣವೆರಡೂ ಹೊರಗಾದವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ನಿಜಸುಖ ಸಮನಿಸಿತ್ತಾಗಿ.