Index   ವಚನ - 270    Search  
 
ಏಳುನೆಲೆಯ ಮಣಿಯ ಮಾಡದ ಮಾಣಿಕ್ಯದ ಮಂಟಪದಲ್ಲಿ ಲೀಲೆಯಿಂದ ಶಿವ ಮೂರ್ತಿಗೊಂಡಿದ್ದನಯ್ಯ. ಓಲಗಗೊಡುತ್ತಿದ್ದರಯ್ಯ ಸಕಲಗಣಂಗಳು. ಸೋಹಂ ಸೋಹಂ ಎನ್ನುತ್ತ ದಿವಾರಾತ್ರಿಗಳಿಲ್ಲದ ಪೂಜೆಯ ಮಾಡುತ್ತಿದ್ದರಯ್ಯ ಶಿವಗಣಂಗಳು. ಪೂಜೆ ನಿರ್ಮಾಲ್ಯವಾಗದೆ, ಕೇಳಿಕೆ ನಿಶ್ಯೂನ್ಯವಾಗದ ಮುನ್ನ ಆನಂದ ಬಿಂದು ತುಳುಕದೆ, ನಂದಿ ಮುಂದುಗೆಡದೆ ಅಂದವಳಿಯದೆ ಕೂಡಬೇಕು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ.