Index   ವಚನ - 286    Search  
 
ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅರ್ಧಾವಲೋಕನದಿಂದ ನಾಸಿಕಾಗ್ರದಲ್ಲಿ ಪ್ರಸಾದವ ಕಂಡುಂಡು, ಮುಕ್ತಿವನಿತೆಗೆ ಬೇಟವ ಮಾಡಿದಡೆ ಬೇಟಕ್ಕೆ ಮರುಳಾಗಿ ಕೂಡಿದಳಯ್ಯ. ಆರು ವನಿತೆಯರ ವಂಚಿಸಿ ಕೂಡಿದಳು, ಆರು ಒಗೆತನ ಕೆಟ್ಟಿತ್ತು. ಪುರುಷ ಸ್ತ್ರೀಯೊಳಗಡಗಿ, ಸ್ತ್ರೀ ಪುರುಷನೊಳಗಡಗಿ ಇಬ್ಬರೆನಿಸದೆ ಒಬ್ಬರಾದುದನು ಏನೆಂದುಪಮಿಸಬಹುದು ನಿರ್ವಿಕಲ್ಪಯೋಗವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾದ ಘನವನು?.