Index   ವಚನ - 288    Search  
 
ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲಿಂಗವು, ಸರ್ವಜ್ಯೋತಿವಸ್ತುಗಳಿಗೆ ಪರಮಾಶ್ರಯ ತಾನಾಗಿ, ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ, ಮನದ ನೆನಹಿನ ವಿಶ್ರಾಮಕ್ಕೆ ಸ್ಥಾನವಾದ ಜ್ಯೋತಿರ್ಲಿಂಗವ ನೆನೆದು ಸುಖಿಯಾದೆ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.