ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ
ನಾದ ಬಿಂದು ಕಲೆಯೆಂಬ
ದಿವ್ಯಪೀಠದ ಮೇಲೆ ತೋರುತ್ತ
ತನ್ನ ಕಲೆಯನೆಲ್ಲಾ ದ್ವಾರಂಗಳಲ್ಲಿ ಬೀರುತ್ತ
ಮತ್ತೆಲ್ಲವ ಮೀರಿದ ನಿರ್ಮಲ ಶಿವಲಿಂಗರೂಪು
ತಾನೆ ಪರಮ ಪದವು.
ಆ ಪರಮ ಪದವನರಿದ ನಿರ್ಮಲ ಜ್ಞಾನಿಯೇ
ನಿಜಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Art
Manuscript
Music
Courtesy:
Transliteration
Ājñācakrada madhyahr̥dayadalli bharitavāgi
nāda bindu kaleyemba
divyapīṭhada mēle tōrutta
tanna kaleyanellā dvāraṅgaḷalli bīrutta
mattellava mīrida nirmala śivaliṅgarūpu
tāne parama padavu.
Ā parama padavanarida nirmala jñāniyē
nijamuktanayyā,
nijaguru svatantrasid'dhaliṅgēśvara.