Index   ವಚನ - 292    Search  
 
ಆತ್ಮ ಪರಮಾತ್ಮ ಯೋಗವನರಿದೆನೆಂಬ ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು, ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ, ಆತ್ಮಪರಮಾತ್ಮ ಯೋಗವನರಿಯಬಾರದು. ಆತ್ಮಪರಮಾತ್ಮ ಯೋಗವನರಿದಂಗಲ್ಲದೆ, ಅರಿವು ಮರವೆಗಳು ನಷ್ಟವಾಗದು.ಹಮ್ಮು ನಷ್ಟವಾ[ದುದೇ], ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವ ಪರಮರೈಕ್ಯವು.