ಆತ್ಮ ಪರಮಾತ್ಮ ಯೋಗವನರಿದೆನೆಂಬ
ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು,
ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ,
ಆತ್ಮಪರಮಾತ್ಮ ಯೋಗವನರಿಯಬಾರದು.
ಆತ್ಮಪರಮಾತ್ಮ ಯೋಗವನರಿದಂಗಲ್ಲದೆ,
ಅರಿವು ಮರವೆಗಳು ನಷ್ಟವಾಗದು.ಹಮ್ಮು ನಷ್ಟವಾ[ದುದೇ],
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವ ಪರಮರೈಕ್ಯವು.