Index   ವಚನ - 291    Search  
 
ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ ನಾದ ಬಿಂದು ಕಲೆಯೆಂಬ ದಿವ್ಯಪೀಠದ ಮೇಲೆ ತೋರುತ್ತ ತನ್ನ ಕಲೆಯನೆಲ್ಲಾ ದ್ವಾರಂಗಳಲ್ಲಿ ಬೀರುತ್ತ ಮತ್ತೆಲ್ಲವ ಮೀರಿದ ನಿರ್ಮಲ ಶಿವಲಿಂಗರೂಪು ತಾನೆ ಪರಮ ಪದವು. ಆ ಪರಮ ಪದವನರಿದ ನಿರ್ಮಲ ಜ್ಞಾನಿಯೇ ನಿಜಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.