ಅರಿದರಿದೆವೆ[ಯಿಕ್ಕದೆ] ದೃಷ್ಟಿಯ ನಾಸಿಕಾಗ್ರದಲ್ಲಿರಿಸಿ ನೋಡುತ್ತ,
ಹೃದಯಕಮಲದಲ್ಲಿದ್ದ ಅಚಲಲಿಂಗವ
ಒಳಗೆ ಜ್ಞಾನಲೋಚನದಿಂದ ನೋಡುತ್ತ,
ತನುಮನೇಂದ್ರಿಯ ತರಹರವಾಗಿ,
ಮನ ನಿವಾತಜ್ಯೋತಿಯಂತೆ ನಿಂದು
ನಿಜವ ಕೂಡಬಲ್ಲಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜ ಯೋಗಿ.
Art
Manuscript
Music
Courtesy:
Transliteration
Aridarideve[yikkade] dr̥ṣṭiya nāsikāgradallirisi nōḍutta,
hr̥dayakamaladallidda acalaliṅgava
oḷage jñānalōcanadinda nōḍutta,
tanumanēndriya taraharavāgi,
mana nivātajyōtiyante nindu
nijava kūḍaballātane,
nijaguru svatantrasid'dhaliṅgēśvaranalli sahaja yōgi.