Index   ವಚನ - 295    Search  
 
ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ ಮಾನ ಅಪಮಾನ, ಹೆಚ್ಚು ಕುಂದುಗಳೆಂಬವೇನೂ ಇಲ್ಲ. ಆತನಿರವು ಬೆಂದ ಪಟದಂತೆ, ಬಯಲ ಚಿತ್ರಿಸಿದ ರೂಹಿನಂತೆ, ತನ್ನ ತೋರದೆ ತಾನೇ ಶಿವನಾಗಿ ನಿಂದ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣನು.