ಲಿಂಗವ ನೋಡಲೆಂದು ಅಂಗವಿಸಹೋದರೆ
ಆ ಲಿಂಗ ತನ್ನತ್ತ ಪಶ್ಚಿಮಮುಖವಾಗಿ ನೋಡುತ್ತಿರೆ
ತಾ ಪೂರ್ವಮುಖವಾಗಿ ನೋಡಲು
ಮಹಾಶ್ಚರ್ಯದ ರೂಪಾಗಿ ಕಾಣಿಸುತ್ತದೆ ನೋಡಾ.
ಉದಕದೊಳಗಣ ಜ್ಯೋತಿಯದು ಉದಯಬಿಂದು
ರತ್ನದಂತೆ ತೋರುತ್ತದೆ ನೋಡಾ.
ಪೂರ್ಣಚಂದ್ರನಂತೆ ಅಮೃತಮಯ ಮಂಗಲಸ್ವರೂಪ
ಪರಮಾನಂದ ನೋಡಾ.
'ಯಥಾಪೋ ಜ್ಯೋತಿರಾಕಾರಂ ಬ್ರಹ್ಮಾಮೃತ ಶಿವಾತ್ಮಕಂ'
ಎಂದುದಾಗಿ
ಎನ್ನ ಲೋಚನಾಗ್ರದಲ್ಲಿ ಬೆಳಗುವ
ಪರಬ್ರಹ್ಮವನು ನೆನೆದು ಸುಖಿಯಾದೆನು,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.
Art
Manuscript
Music
Courtesy:
Transliteration
Liṅgava nōḍalendu aṅgavisahōdare
ā liṅga tannatta paścimamukhavāgi nōḍuttire
tā pūrvamukhavāgi nōḍalu
mahāścaryada rūpāgi kāṇisuttade nōḍā.
Udakadoḷagaṇa jyōtiyadu udayabindu
ratnadante tōruttade nōḍā.
Pūrṇacandranante amr̥tamaya maṅgalasvarūpa
paramānanda nōḍā.
'Yathāpō jyōtirākāraṁ brahmāmr̥ta śivātmakaṁ'
endudāgi
enna lōcanāgradalli beḷaguva
parabrahmavanu nenedu sukhiyādenu,
enna nijaguru svatantrasid'dhaliṅgēśvarana.