Index   ವಚನ - 296    Search  
 
ಲಿಂಗವ ನೋಡಲೆಂದು ಅಂಗವಿಸಹೋದರೆ ಆ ಲಿಂಗ ತನ್ನತ್ತ ಪಶ್ಚಿಮಮುಖವಾಗಿ ನೋಡುತ್ತಿರೆ ತಾ ಪೂರ್ವಮುಖವಾಗಿ ನೋಡಲು ಮಹಾಶ್ಚರ್ಯದ ರೂಪಾಗಿ ಕಾಣಿಸುತ್ತದೆ ನೋಡಾ. ಉದಕದೊಳಗಣ ಜ್ಯೋತಿಯದು ಉದಯಬಿಂದು ರತ್ನದಂತೆ ತೋರುತ್ತದೆ ನೋಡಾ. ಪೂರ್ಣಚಂದ್ರನಂತೆ ಅಮೃತಮಯ ಮಂಗಲಸ್ವರೂಪ ಪರಮಾನಂದ ನೋಡಾ. 'ಯಥಾಪೋ ಜ್ಯೋತಿರಾಕಾರಂ ಬ್ರಹ್ಮಾಮೃತ ಶಿವಾತ್ಮಕಂ' ಎಂದುದಾಗಿ ಎನ್ನ ಲೋಚನಾಗ್ರದಲ್ಲಿ ಬೆಳಗುವ ಪರಬ್ರಹ್ಮವನು ನೆನೆದು ಸುಖಿಯಾದೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.