Index   ವಚನ - 297    Search  
 
ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವ ವಿಭಾಗಿಸಿ ಕಳೆದು ಆ ತನುತ್ರಯದಿಂದ ಜೀವತ್ರಯವನು ಹಿಂಗಿಸಿ ಒಂದು ಮಾಡಿ ನಿಜಾಂಗರೂಪನಾದ ಪರಮಾತ್ಮನಲ್ಲಿ ಕೂಡಿ ಅಂಗ ಲಿಂಗ ಸಂಗರೂಪಾದ ಪರಮಾತ್ಮನೆ ಪರವೆಂದರಿದು ಪರಮಾತ್ಮನೆ ಘನವೆಂದರಿದು, ಪರಮಾತ್ಮನೆ ತಾನೆಂದರಿದು ಲಿಂಗಾಂಗಸಂಗವಾದ ಷಡುಸ್ಥಲವನಂಗೀಕರಿಸಿ ಅನುದಿನ ಎಡೆಬಿಡುವಿಲ್ಲದೆ ಶಿವಾನುಭಾವಿಯಾಗಿ ಶಿವಲಿಂಗವ ಭಜಿಸುವವನೆ ಮುಕ್ತನು. ಉಳಿದವರೆಲ್ಲಾ ಬದ್ಧರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.