Index   ವಚನ - 317    Search  
 
ಅಂತರಂಗ ಶುದ್ಧವಿಲ್ಲದವರೊಳಗೆ ಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡದು ನೋಡಯ್ಯ. ಅಂತರಂಗ ಶುದ್ಧವುಳ್ಳವರೊಳಗೆ ಬಾಳೆಯ ಹಣ್ಣಿನಂತೆ ಸುಗುಣ ತೋರುವುದು ನೋಡಯ್ಯ. ಇದು ಕಾರಣ. ಅಂತರಂಗ ಶುದ್ಧವಿಲ್ಲದವರ ಸಂಗದಲ್ಲಿ ಇರಬಾರದು ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.