Index   ವಚನ - 329    Search  
 
ಉರಗನ ಫಣಾಮಣಿಯ ಬೆಳಗನರಿ ಕಂಡ. ಉರವಣಿಸಿ ಮೇಲಕ್ಕೆ ಹಾರುವ ಹದ್ದಿನ ಹಾರವನರಿ ಕಂಡ. ಸರಸ್ವತಿ ಸಿರಿಯೊಡನೇಕಾಂತದಲ್ಲಿಹ ಪರಿಯನರಿ ಕಂಡ. ಹರಿಯಜರುದ್ರರ ಕರ್ಮವನಳಿದ ಪರಿಯನರಿ ಕಂಡ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ತಾನೆಂದರಿ ಕಂಡಾ.