Index   ವಚನ - 330    Search  
 
ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು. ಅಷ್ಟಮದಂಗಳು ನಷ್ಟವಾದುವು. ಅರಿಷಡ್ವರ್ಗದುರವಣಿ ತರಹರಿಸಲಾರದೆ ಹೋದವು. ಪಂಚೇಂದ್ರಿಯಂಗಳ ವಂಚನೆ ಬರತವು. ಕರ್ಮೇಂದ್ರಿಯಂಗಳ ವ್ಯಾಪಾರ ನಿಂದವು. ಕಾಮನ ಬಾಣ ಬತ್ತಳಿಕೆಯಲ್ಲಿ ಹಾಯ್ದುವು. ಕಾಲನ ಅಧಿಕಾರ ನಿಂದಿತ್ತು. ಮಾಯೆ ಮುಂದುಗೆಟ್ಟು ಮುಖವಿಡಲಮ್ಮದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣರ ಮುಂದೆ.