Index   ವಚನ - 332    Search  
 
ತಾಳಮರದ ಮೇಲಣ ಕೋಡಗ, ತಾಳರಸವ ಕೊಂಡು ದೆಸೆದೆಸೆಯ ಶಾಖೆಗಳಿಗೆ ಲಂಘಿಸಿ, ಹರಿದಾಡುತ್ತಿದ್ದಿತು ನೋಡಾ. ಹರಿದಾಡುವ ಕೋಡಗವ ಹಿಡಿದು ಕಂಬದಲ್ಲಿ ಕಟ್ಟಿದರೆ ಕಂಬದ ತುದಿಯ ಮಣಿಯನೇರಿ ನಿಂದು ನೋಡುತ್ತಿದ್ದಿತ್ತು ನೋಡಾ. ಕಂಬ ಮುರಿದು ಮಣಿ ಬಯಲಾಯಿತ್ತು, ಕೋಡಗವಳಿಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,ನಿಮ್ಮ ಶರಣನ ಮುಂದೆ.