Index   ವಚನ - 331    Search  
 
ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ ತುಂಬಿಯ ಒಡಲೊಳಡಗಿತ್ತು. ತುಂಬಿಯೆಂಬರದಲಡಗಿ, ಅಂಬರ ತುಂಬಿಯಲಡಗಿ ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ.