Index   ವಚನ - 334    Search  
 
ಆವಾವ ಭಾಷಾಂಗವ ತೊಟ್ಟರೂ ಆ ಭಾಷಾಂಗಕ್ಕೆ ತಕ್ಕ ಗತಿ ಭಾಷೆಯಿರಬೇಕು. ಶಿವಲಾಂಛನಧಾರಿಯಾದಡೆ, ಆ ಲಾಂಛನಕ್ಕೆ ತಕ್ಕ ನಡೆ ನುಡಿ ಇರಬೇಕು. ಅದೆಂತೆಂದಡೆ: ಕಾಯದ ಕಳವಳವ ಗೆಲಿದು, ಮಾಯಾಪ್ರಪಂಚ ಮಿಥ್ಯವೆಂದರಿದು, ಕ್ಷಮೆ ದಮೆ ಶಾಂತಿ ದಯೆ ಜ್ಞಾನ ವೈರಾಗ್ಯ ಮುಂತಾಗಿ ಸುಳಿಯಬೇಕು. ಲಿಂಗಮೋಹಿಯಾಗಿದ್ದಲ್ಲದೆ, ಉಳಿದ ಉದ್ದೇಶದ ಸುಳುಹೆಲ್ಲಾ ಬಿರುಗಾಳಿಯ ಸುಳುಹಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.