Index   ವಚನ - 335    Search  
 
ನಾನು ಹಿರಿಯ, ತಾನು ಹಿರಿಯರೆಂಬವರೆಲ್ಲ ಹಿರಿಯರೆ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-ದೊಳಗಿಪ್ಪವರೆಲ್ಲಾ ಹಿರಿಯರೆ? ಆಟಮಟ ಕುಟಿಲ ಕುಹಕ ಪಿಸುಣತನದಲ್ಲಿಪ್ಪವರೆಲ್ಲಾ ಹಿರಿಯರೆ? ಸರ್ಪ ಸಾವಿರ ಕಾಲ ಇರ್ದಡೇನು, ವಿಷಬಿಡುವುದೇ? ಹಾವುಮೆಕ್ಕೆಯು ಹಣ್ಣಾದಡೇನು, ಮಧುರವಪ್ಪುದೆ? ಅರಿಷಡ್ವರ್ಗದುರವಣಿಗೊಳಗಾದಡಾತ ಹಿರಿಯನೆ? ಸಮತೆ ಸಮಾಧಾನ ತುಂಬಿ ತುಳುಕದೆ, ಸುಜ್ಞಾನಭರಿತವಾದಡಾತ ಹಿರಿಯನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದೆ ಬರುಮಾತಿನಲ್ಲಿ ಹಿರಿಯನೆಂದಡೆ ನಾಚಿತ್ತೆನ್ನ ಮನವು.