ನಾನು ಹಿರಿಯ, ತಾನು ಹಿರಿಯರೆಂಬವರೆಲ್ಲ ಹಿರಿಯರೆ?
ಕಾಮ ಕ್ರೋಧ ಲೋಭ ಮೋಹ ಮದ
ಮತ್ಸರ-ದೊಳಗಿಪ್ಪವರೆಲ್ಲಾ ಹಿರಿಯರೆ?
ಆಟಮಟ ಕುಟಿಲ ಕುಹಕ ಪಿಸುಣತನದಲ್ಲಿಪ್ಪವರೆಲ್ಲಾ ಹಿರಿಯರೆ?
ಸರ್ಪ ಸಾವಿರ ಕಾಲ ಇರ್ದಡೇನು, ವಿಷಬಿಡುವುದೇ?
ಹಾವುಮೆಕ್ಕೆಯು ಹಣ್ಣಾದಡೇನು, ಮಧುರವಪ್ಪುದೆ?
ಅರಿಷಡ್ವರ್ಗದುರವಣಿಗೊಳಗಾದಡಾತ ಹಿರಿಯನೆ?
ಸಮತೆ ಸಮಾಧಾನ ತುಂಬಿ ತುಳುಕದೆ,
ಸುಜ್ಞಾನಭರಿತವಾದಡಾತ ಹಿರಿಯನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದೆ
ಬರುಮಾತಿನಲ್ಲಿ ಹಿರಿಯನೆಂದಡೆ ನಾಚಿತ್ತೆನ್ನ ಮನವು.
Art
Manuscript
Music
Courtesy:
Transliteration
Nānu hiriya, tānu hiriyarembavarella hiriyare?
Kāma krōdha lōbha mōha mada
matsara-doḷagippavarellā hiriyare?
Āṭamaṭa kuṭila kuhaka pisuṇatanadallippavarellā hiriyare?
Sarpa sāvira kāla irdaḍēnu, viṣabiḍuvudē?
Hāvumekkeyu haṇṇādaḍēnu, madhuravappude?
Ariṣaḍvargaduravaṇigoḷagādaḍāta hiriyane?
Samate samādhāna tumbi tuḷukade,
sujñānabharitavādaḍāta hiriyanu.
Nijaguru svatantrasid'dhaliṅgēśvarā, nim'manariyade
barumātinalli hiriyanendaḍe nācittenna manavu.