Index   ವಚನ - 336    Search  
 
ಈಶವೇಷವ ಧರಿಸಿದಡೇನು ವೇಷಕ್ಕೆ ಈಶನಂಜಿ ಒಲಿವನೆ? ಹೊರವೇಷ ಚೆನ್ನಾಗಿತ್ತಲ್ಲದೆ ಒಳಗೆ ಅರಿವಿಲ್ಲದ ವೇಷವೇನು? ಗ್ರಾಸಕ್ಕೆ ಭಾಜನವಾಯಿತ್ತಲ್ಲದೆ ಲಿಂಗಕ್ಕೆ ಭಾಜನವಾದುದಿಲ್ಲ. ಮತ್ತೆಂತೆಂದಡೆ: ಅರಿವು ಆಚಾರ ಅನುಭಾವ ಭಕ್ತಿ ವಿರಕ್ತಿ ನೆಲೆಗೊಂಡಿಪ್ಪ ರೂಪಿನಲ್ಲಿ ಶಿವನೊಲಿದಿರ್ಪನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.