Index   ವಚನ - 341    Search  
 
ಬ್ರಹ್ಮ ವಿಷ್ಣುಗಳಿಗಗೋಚರ ಪ್ರಸಾದವು ಸಿದ್ಧ ಗಂಧರ್ವರಿಗಸಾಧ್ಯ ಪ್ರಸಾದವು ನರಸುರ ಮನುಮುನಿಗಳಿಗಭೇದ್ಯ ಪ್ರಸಾದವು ವಿಶ್ವದೊಳು ಪರಿಪೂರ್ಣವಾಗಿ, ವಿಶ್ವಕ್ಕತೀತವೆನಿಸಿದ ಪರಮ ಪ್ರಸಾದವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ ಸಾಧ್ಯ, ಉಳಿದವರಿಗಸಾಧ್ಯವು.