ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ.
ಅಂಗ ಲಿಂಗ ಸಂಗದೊಳಗೆ ಪರಮ ಸುಖವಿದೆ.
ಪರಮ ಸುಖದೊಳಗೆ ಪ್ರಸಾದವಿದೆ.
ಪ್ರಸಾದದೊಳಗೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣನ ನಿಲವಿದೆ.
Art
Manuscript
Music
Courtesy:
Transliteration
Aṅgadoḷage liṅgavide, liṅgadoḷage aṅgavide.
Aṅga liṅga saṅgadoḷage parama sukhavide.
Parama sukhadoḷage prasādavide.
Prasādadoḷage nijaguru svatantrasid'dhaliṅgēśvarā,
nim'ma śaraṇana nilavide.