Index   ವಚನ - 360    Search  
 
ಸತ್ ಚಿತ್ ಆನಂದ ನಿತ್ಯಪರಿಪೂರ್ಣ ಪರಂಜ್ಯೋತಿಯೊಡಗೂಡಿ ಅರಿದಿರ್ದಾತಂಗೆ, ಸರ್ವ ವಿಷಯಜ್ಞಾನವಿಲ್ಲ, ದೇವತಿರ್ಯಙ್ಮನುಷ್ಯಾದಿ ವ್ಯವಹಾರ ವಿಕಲ್ಪವಿಲ್ಲ, ಮಾಯಾಭ್ರಾಂತಿ ಲಯವಾಯಿತ್ತಾಗಿ. ಸುಜ್ಞಾನ ಸುಷುಪ್ತಿಯನೆಯ್ದಿ ಶಿವ ತಾನಾದ ಅವಿರಳ ಪ್ರಸಾದಿಗೆ ಇಹಪರವೆಂಬುದಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು.