ಶಿವಪ್ರಸಾದಸಂಪತ್ತು ದೊರಕೊಂಡಾತಂಗೆ
ಶಿವಭಾವವಲ್ಲದೆ ಅನ್ಯಭಾವ ಉಂಟೆ ಹೇಳಾ?
ವಿಶ್ವನೊಳಡಗಿ ತೋರುವ ವಿಶ್ವ ಜಗಜ್ಜಾಲವು
ಒಮ್ಮೆ ತೋರುವದು, ಒಮ್ಮೆ ಅಡಗುವದು.
ಅದರಂತೆ ತೋರದೆ ಅಡಗದೆ ಉಳುಮೆಯಾದ
ಅಂಥ ಪ್ರಸಾದವನು ಅನುಭವಿಸಿದ ಶಿವಪ್ರಸಾದಿಗೆ
ಭೇದದ ಅರಿವು ನಿಃಪತಿಯಾಗಿ
ಅಭೇದಜ್ಞಾನ ಸಿದ್ಧವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ.