Index   ವಚನ - 367    Search  
 
ಕಾಷ್ಠದಲ್ಲಿ ಹುಟ್ಟಿದ ಅಗ್ನಿ, ಕಾಷ್ಠವ ದಹಿಸಿ, ತಾನೊಡನೆ ಲೀಯವಾದಂತೆ, ಭಾವದಲ್ಲಿ ಶಿವಾನಂದಭಾವ ಹುಟ್ಟಿ ಭಾವ ನಿಃಪತಿಯಾಯಿತ್ತು. ಭಾವ ನಿಃಪತಿಯಾಗಲು, ಭಾವ್ಯ ಭಾವ ಭಾವಕವೆಂಬುದಿಲ್ಲದೆ ತಮ್ಮಲ್ಲಿ ತಾವೆ ಲೀಯವಾದವು. ಇಂತಾದ ಬಳಿಕ ಭಾವಿಸಲೇನುಂಟು ಹೇಳಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಾವಾತೀತನೆಂದು ಶ್ರುತಿ ಸಾರುತ್ತಿರಲು ಇನ್ನು ಭಾವಿಸಲೇನುಂಟು ಹೇಳಾ?