ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು
ಕಲ್ಪಿಸಿ ರೂಹಿಸಿ ಭಾವಿಸಿ ನೋಡಲು
ಅದು ಭಾವಸಂಕಲ್ಪವಲ್ಲದೆ ನಿಜವಲ್ಲ.
ಶುಕ್ತಿಯಲ್ಲಿ ರಜತಭಾವ ತೋರಿತ್ತೆಂದಡೆ, ಅದು ಸಹಜವೆ?
ಇದು ಭಾವಸಂಕಲ್ಪವೆಂದರಿದಾಗವೆ ಭಾವ ನಿಃಪನ್ನವಾಗಿ
ಪರಿಪೂರ್ಣ ಬೋಧಪರಾನಂದರೂಪ ತಾನೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೆ
ಲಿಂಗವಲ್ಲದೆ ಬೇರೆ ಲಿಂಗವಿಲ್ಲ.