Index   ವಚನ - 370    Search  
 
ಘಟಮಠೋಪಾಧಿಯೊಡನೆ ಕೂಡಿ, ಆಕಾಶವಿದ್ದಿತ್ತೆಂದೊಡೆ ಆ ಘಟಮಠದಂತೆ ಖಂಡಿತವಹುದೆ ಅಖಂಡಬಯಲು? ಪಿಂಡದೊಳಗಾತ್ಮನಿದ್ದನೆಂದೊಡೆ, ಆ ಪಿಂಡದಂತೆ ಖಂಡಿತನಹನೆ? ಪರಿಪೂರ್ಣ ಪರಂಜ್ಯೋತಿ ಪರಮಾತ್ಮನು ಷಟ್ತ್ರಿಂಶತ್ ತತ್ವಂಗಳಿಂದ ಕೂಡಿದ ಜ್ಞಾನಪಿಂಡದೊಳಗೆ, ಹೃದಯಕಮಲಸಿಂಹಾಸನದ ಮೇಲೆ ಮೂರ್ತಿಗೊಂಡಿದ್ದನಯ್ಯ. ಜಲದೊಳಗೆ ಹೊಳೆವಾಗಸದಂತೆ, ಮನದೊಳಗೆ ಮನರೂಪನಾಗಿ ಬೆಳಗುತ್ತಿದ್ದನಯ್ಯ ಪರಶಿವನು. ಇಂತಾದ ಕಾರಣ, ಸಪ್ತಧಾತು ಸಮೇತವಾದ ಶರಣನ ಕಾಯವೇ ಕೈಲಾಸವಾಯಿತ್ತು, ಮನ ಸಿಂಹಾಸನವಾಯಿತ್ತು. ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ.