Index   ವಚನ - 371    Search  
 
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ ಎಣಿಸಬಾರದ ಬಹಳ ಬ್ರಹ್ಮಕ್ಕೆ ಎಣೆಯಾವುದು ಹೇಳಾ? ಅಗಣಿತನಕ್ಷಯ ಸರ್ವಜೀವ ಮನಃಪ್ರೇರಕ ಸರ್ವಗತ ಸರ್ವಜ್ಞ ಏಕೋದೇವ ಸಂವಿತ್ ಪ್ರಕಾಶ ಪರಮೇಶ್ವರನು ಮನವೆಂಬ ದರ್ಪಣದೊಳಗೆ, ಬಿಂದ್ವಾಕಾಶರೂಪನಾಗಿ ಬೆಳಗಿ ತೋರುವ ಶಿವನ ಅಂದವ ತಿಳಿದು ನೋಡಿ ಕೂಡಬಲ್ಲಾತನೆ ಪರಮಶಿವಯೋಗಿ. ಆತನೇ ಜನನ ಮರಣ ರಹಿತ, ಆತನೇ ಸರ್ವಜ್ಞನು, ಆತನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ.