Index   ವಚನ - 415    Search  
 
ದಶದಿಕ್ಕುಗಳಿಂದ ರೂಹಿಸಬಾರದಾಗಿ, ಕಾಲಂಗಳಿಂದ ಕಲ್ಪಿಸಬಾರದು. ಕಾಲಂಗಳಿಂದ ಕಲ್ಪಿಸಬಾರದಂಥ ಅಖಂಡ ಚಿನ್ಮಾತ್ರ ಸ್ವರೂಪನಾದ ಶಿವನ ಸ್ವಾನುಭಾವಜ್ಞಾನದಿಂ ಸಾಧಿಸಿ ಕಂಡ ಶಾಂತ ಸ್ವಯಂಜ್ಯೋತಿ ಸ್ವರೂಪನಾದ ಶರಣ. ಅಂಗಸಂಗವಿಲ್ಲದೆ ನಿಸ್ಸಂಗಿಯಾದ ಕಾರಣ ಉಪಮಿಸಬಾರದು. ಕಡೆಮೊದಲಿಲ್ಲದಾಕಾಶವು ಖೇಚರಾದಿಗಳಿಂದ ಲೇಪವಿಲ್ಲದಂತೆ ನಿತ್ಯ ನಿಜ ಜೈತನ್ಯಾಕಾರ ರೂಪನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.